Monday, 19 September 2011

ಓ ಬಾಲೆ ಕಂಡೊಮ್ಮೆ ನೀ bus ಸ್ಟಾಂಡಿನಲ್ಲಿ
ಎತ್ತ ಹೊರಟೆ ಕಾಣದ ಪುಷ್ಪಕ ವಿಮಾನದಲಿ
ಹುಡುಕಿ ಹುಡುಕಿ ಸೋತೆ ನಿನ್ನ mobile ನಂಬರ್
ಆದರು ಸಿಗಲಿಲ್ಲ ನೀನು facebookನಲ್ಲಿ, orkutನಲ್ಲಿ
ಕೊನೆಗೆ ಗೊತ್ತಾಯಿತು ನೀ ಇದ್ದಿದ್ದು ನನ್ನ ಮನೆಯ ಪಕ್ಕದಲ್ಲಿ .
ಹಳೆಯ ನೆನಪುಗಳು ಮರೆಯದೆ ಮನದಲಿ.
ಕೆದಕುತ ನಿಂತಿವೆ ನಿನ್ನಯ ನೆನಪಲಿ.
ಸೌಮ್ಯ ಭಾವೆನಯ ನನ್ನ ನನಸುಗಳ .
ಕಾಡಿ ಕಾಡಿ ಕೊಂದಿವೆ ನಗ್ನ ಕನಸುಗಳು.

ವಿದಿಯಾಟ ಬಲ್ಲವರು ಯಾರಿಹರು ಇಲ್ಲಿ.
ನಿನ್ನ ಮನದಾಸೆ ಬಲ್ಲವರು ಯಾರಿಹರು ಜಗದಲ್ಲಿ.
ನೂರಾರು ಬಯಕೆ ಒಮ್ಮೊಮ್ಮೆ ಉಕ್ಕಿ.
ಕೊಲ್ಲುತಿಹುದು ನನ್ನನ್ನು ಕುಕ್ಕಿ.

ಪ್ರೀತಿಸಿ ಸೋತವರೆಲ್ಲ ಯಾಕಾಗ ಬೇಕು ದೇವದಾಸರು .
ಅಗಬಾರದೇಕೆ ನಾವೆಲ್ಲಾ ತತ್ವಜ್ಞಾನಿಗಳು ದಾರ್ಶನಿಕರು .
ಬದುಕುವುದು ಹುಡುಗರು ಹೆಣ್ಣಿಗಾಗಿ ಅಲ್ಲ .
ಕೇವಲ ಹೆಣ್ಣಿ೦ದಲೆ ಈ ಜೀವನವಲ್ಲ .

-- ಕಂಡ ಕನಸುಗಳ ಹಿಂದೆ ಓಡದಿರು ಓ ಬಾಲೆ.
ನನ್ನ ಮನಸು ಕಾಯುತಿದೆ ನಿನಗಾಗಿ ಇಲ್ಲೇ.
ಮರಳಿ ಮರಳಿ ತಿರುಗಿ ನೋಡಿ ಒಮ್ಮೆ ಬಾ
ನಿಟ್ಟುಸಿರ ನಟ್ಟ ನಡುವೆ ಓಡಿ ಬಾ ನನ್ನ ಕಡೆಗೆ !
 ನಲ್ಲ ನೀ ಬರೆವ ಎಲ್ಲ ಕವನಗಳಲಿ
 ಅದರ ಸವಿಯ ಸಿಹಿ ಭಾವನೆಗಳಲಿ 
 ಬರಲೇನು ಮುಂಗಾರಾಗಿ ಕರೆಯದೆ ನೀ
 ಒಡಲ ಭೂಮಿಯ ತಣಿಸಲು ಒಂದಾಗಿ 
ಹೊಸ ಭಾವನೆಗಳ ಭಾವುಕತೆಯ ಕಡಲಿನಲಿ
ಬೆಂದು ಹೋಗಿಹೆ ಕಾದು ಕಾದು ನಿನ್ನಯ ನೆನಪಿನಲ್ಲಿ
ಮರೆಯದೆ ಮರುಕಳಿಸುತಿವೆ ಮಳೆಯ ಹನಿಗಳಲಿ
ನನ್ನ ನಿನ್ನ ಗತ ಪ್ರೇಮದ ಕವನಗಳು ಈ ಸಮಯದಲಿ

kavana

ನಗುವ ನರ್ತನದಿ ಒಲವ ತೋರುತಿದೆ
ಎತ್ತ ನೋಡಿದರು ತನ್ನ ಅಲೆಯ ಚಾಚಿ
ನಿಂತ ಬಂಡೆಗಳಿಗೆ ಬಂದು ಅಪ್ಪಳಿಸಿದೆ ಗಾಳಿ ಬೀಸಿ
ಕಡಲು ಕರೆಯಲು ಪ್ರತಿ ಕ್ಷಣದಿ ಪ್ರೀತಿ ಸೂಸಿ

kavana

ಕನಸಿನ ಕಣ್ಣಿನ ಪುಟದಲ್ಲಿ ನಿನ್ನದೇ ಚಿತ್ರವು
ಕಣ್ಣನು ತೆರೆಯುತ ನೋಡಲು ಎಲ್ಲವು ಮಾಯವು
ನಗುವಿನ ಹಿಂದಿದೆ ನಿನ್ನ ಚೆಲುವ ಮೊಗವು
ನೆನೆಯಲು ಮುಖದಲ್ಲಿದೆ ಮಂದಹಾಸದ ನಿಲುವು

kavana

ಕಣ್ಣೆಲ್ಲ ಕಾದಿದೆ ಮನಸೆಲ್ಲೋ ನೋಡಿದೆ
ನೀ ಬರದಿರಲು ನನ್ ಎದುರು ಕೇಳೆ ಓ ಬಾಲೆ
ಹುಡುಕ್ ಹುಡುಕಿ ನಾ ಸೋತಿಹೆ ಈ ನಿನ್ನ ಬಿಂಬವ
ಹೊಸ ಅನುಭವ ತಂದಿದೆ ನಿನ್ನೀ ಬಗೆಯ ಕವನ